ರೂಪೇಶ್ ಕುಮಾರ್ ಸಿಂಗ್ ಅವರು ಜಾರ್ಖಂಡ್‌ನ ಪತ್ರಕರ್ತರಾಗಿದ್ದು, ಅವರು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಬುಡಕಟ್ಟು ಜನರಿಗಾಗುವ ಕಿರುಕುಳದ ಕುರಿತು ವರದಿ ಮಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ೨೦೨೧ ರಲ್ಲಿ ಭಾರತದಲ್ಲಿ ಪೆಗಾಸಸ್ ಪ್ರಾಜೆಕ್ಟ್ ಅನ್ನು ಬಹಿರಂಗಪಡಿಸುವ ಸಮಯದಲ್ಲಿ ಇವರ ಫೋನ್ ಸಂಖ್ಯೆ (ಇವರ ಕುಟುಂಬ ಇಬ್ಬರು ಸದಸ್ಯರನ್ನು ಒಳಗೊಂಡಂತೆ ) ರಾಜ್ಯದ ಪೆಗಾಸಸ್ (ಸ್ಪೈವೇರ್) ಪ್ರದೇಶದ ಪಟ್ಟಿಯಲ್ಲಿ ಕಂಡುಬಂದಿದೆ. ಬುಡಕಟ್ಟು ಜನರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಹಿಂಸಾಚಾರದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಭಾರತ ಕೇಂದ್ರ ಸರ್ಕಾರ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ರೂಪೇಶ್ ಹೇಳಿದ್ದಾರೆ. ಸ್ಪೈವೇರ್‌ನಿಂದ ಗುರಿಯಾದ ಇತರ ನಾಲ್ವರು ಪತ್ರಕರ್ತರೊಂದಿಗೆ ಅವರು ಭಾರತದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. == ವೈಯಕ್ತಿಕ ಜೀವನ == ರೂಪೇಶ್ ಬುಡಕಟ್ಟು ಸಮಸ್ಯೆಗಳ ಬಗ್ಗೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತ. ಇವರು ಇಪ್ಸಾ ಶತಕ್ಷಿ ಎಂಬುವವರನ್ನು ವಿವಾಹವಾಗಿದ್ದಾರೆ. ಆಕೆಯನ್ನು ಮತ್ತು ಆಕೆಯ ಸಹೋದರಿಯನ್ನು ಪೆಗಾಸಸ್ ಸ್ಪೈವೇರ್ ಗುರಿಯಾಗಿಸಿಕೊಂಡಿತ್ತು. == ಪೆಗಾಸಸ್ ಸ್ಪೈವೇರ್ == ಆದಿವಾಸಿಗಳ ಸ್ಥಳಾಂತರ, ಬುಡಕಟ್ಟು ಹಕ್ಕುಗಳ ದಮನ ಮತ್ತು ಮಾವೋವಾದಿಗಳೆಂದು ಹಣೆಪಟ್ಟಿ ನಂತರ ಸುಳ್ಳು ಆರೋಪದ ಮೇಲೆ ಆದಿವಾಸಿಗಳನ್ನು ಬಂಧಿಸಿದ ಬಗ್ಗೆ ರೂಪೇಶ್ ವರದಿ ಮಾಡಿದರು. ಇವರ ವರದಿಯು ಪೆಗಾಸಸ್ ಸಾಫ್ಟ್‌ವೇರ್‌‌ನ ಕಣ್ಗಾವಲಿಗೆ ಗುರಿಯಾಗಿದೆ ಎಂದು ಅವರು ನಂಬಿದ್ದರು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಜೂನ್ ೨೦೧೯ ರಲ್ಲಿ ಬಿಹಾರ ಪೊಲೀಸರು ಅವರನ್ನು ಬಂಧಿಸಲು ಕಾರಣವಾಯಿತು. ವರದಿ ಮಾಡುವುದನ್ನು ನಿಲ್ಲಿಸಲು ಭದ್ರತಾ ಪಡೆಗಳು ತನ್ನನ್ನು ಪ್ರೇರೇಪಿಸಲು ಪ್ರಯತ್ನಿಸಿದವು ಎಂದು ರೂಪೇಶ್ ಆರೋಪಿಸಿದರು. ಅವರಿಗೆ ಮನವರಿಕೆ ಮಾಡಲು ವಿಫಲವಾದ ನಂತರ ಅವರು ಅವರ ಸಮ್ಮುಖದಲ್ಲಿ ಅವರ ಕಾರಿನಲ್ಲಿ ಜಿಲೆಟಿನ್ ಸ್ಟಿಕ್ಗಳನ್ನು ಮತ್ತು ಡಿಟೋನೇಟರ್ಗಳನ್ನು ನೆಟ್ಟರು ಮತ್ತು ನಂತರ ಅವರನ್ನು ಬಂಧಿಸಿದರು. ದೂರು ದಾಖಲಿಸಿ ೧೮೦ ದಿನಗಳು ಕಳೆದರೂ ಅವರ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ಬಿಹಾರ ಪೊಲೀಸರು ವಿಫಲರಾಗಿದ್ದಾರೆ. ಅವರು ಆರು ತಿಂಗಳು ಜೈಲಿನಲ್ಲಿ ಕಳೆದರು ಮತ್ತು ಯಾವುದೇ ಆರೋಪಪಟ್ಟಿ ಸಲ್ಲಿಸದ ಕಾರಣ ಗಯಾ ಜೈಲಿನಿಂದ ಡಿಸೆಂಬರ್ ೨೦೧೯ ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. == ಬಂಧನ == ೧೭ ಜುಲೈ ೨೦೨೨ ರಂದು, ಸಿಂಗ್ ಅವರನ್ನು ಜಾರ್ಖಂಡ್ ಪೊಲೀಸರು ರಾಮಗಢ್ ಜಿಲ್ಲೆಯ ಅವರ ನಿವಾಸದಿಂದ ಬಂಧಿಸಿದರು. ಇವರ ಲ್ಯಾಪ್‌ಟಾಪ್ ಫೋನ್‌ಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡರು. ಕೈಗಾರಿಕಾ ಮಾಲಿನ್ಯಕಾರಕಗಳಿಂದಾಗಿ ಹಳ್ಳಿಗಳಲ್ಲಿ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬುದರ ಬಗ್ಗೆ ವರದಿಗಳನ್ನು ಪ್ರಕಟಿಸಿದ್ದರಿಂದ ಸಿಂಗ್ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರ ಪತ್ನಿ ಶತಾಕ್ಷಿ ಹೇಳಿದ್ದಾರೆ. == ಉಲ್ಲೇಖಗಳು ==